
ಗೆಳೆಯನೊಬ್ಬ ಕಳುಹಿಸಿದ ಈ ಎಸ್ಸೆಮ್ಮೆಸ್ ನ್ನು ಮತ್ತೆ ಮತ್ತೆ ಓದಿಕೊಂಡೆ...
ಮನದಲ್ಲೇನೋ ಸಂಶಯ.! ಈ ಮಾತು ನಿಜವೇ..?
ಹಾಗಾದರೆ ಎಲ್ಲರಿಗೂ ಮೌನದ ಭಾಷೆ ಅರ್ಥವಾಗುತ್ತದೆಯೇ?
ಇಲ್ಲ... ಖಂಡಿತಾ ಇಲ್ಲ...ಯೋಚಿಸಿದಷ್ಟೂ ಮನಸ್ಸು ಗೊಂದಲದ ಗೂಡಾಗುತ್ತಿದೆ.. ಉತ್ತರ ಮಾತ್ರ ಸಿಗುತ್ತಿಲ್ಲ..
ನನಗೇ ಅರಿವಿಲ್ಲದಂತೆ ಮನಸ್ಸು ಮತ್ತೆ ಅವಳ ನೆನಪನ್ನು ಕೆದಕಲಾರಂಬಿಸಿತು. ನನ್ನೆಲ್ಲಾ ಮಾತನ್ನು ಮೌನವಾಗಿಸಿ ಕೊನೆಗೆ ಆ ಮೌನದ ನೆನಪೊಂದನ್ನೇ ನನ್ನ ಪಾಲಿಗೆ ಉಳಿಸಿ ಹೋದವಳವಳು. ಅವಳ ನಗುವಿನ ಸುಂದರ ಸ್ಮೃತಿ ಮನದಲ್ಲಿ
ಅವಳ ನೆನಪೆಂದರೆ ಹಾಗೇನೆ.. ಕೇವಲ ನೋವು ಮಾತ್ರ ತುಂಬಿದ್ದರೂ ಕೂಡಾ ಅದು ಮಧುರ...ಅಬ್ಬಾ!ಎಷ್ಟೊಂದು ಮಾತುಗಳಿದ್ದವು ನನ್ನಲ್ಲಿ.. ಅವಳು ನಕ್ಕಾಗ "ಮುದ್ದಾಗಿ ಕಾಣುತ್ತಿ" ಅನ್ನಬೇಕಿತ್ತು. ಅತ್ತಾಗ "ನಾನಿದ್ದೇನೆ ಅಳಬೇಡ" ಎಂದು ಹೇಳಬೇಕಿತ್ತು. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ನನ್ನನ್ನು ಗೋಳು ಹೊಯ್ದುಕೊಳ್ಳುವಾಗ "ಸದಾ ಹೀಗೆ ನನ್ನ ಜೊತೆಗಿರು" ಅನ್ನಬೇಕಿತ್ತು.. ಆದರೆ ಈ ಯಾವ ಮಾತುಗಳೂ ನನ್ನ ತುಟಿಯನ್ನು ದಾಟಲೇ ಇಲ್ಲ.. ಅವಳ ಮುಗ್ಧ ಸೌಂದರ್ಯದೆದುರು ನನ್ನ ಮಾತುಗಳಿಗೆ ಧ್ವನಿಯಾಗುವ ತಾಕತ್ತು ಬರಲೇ ಇಲ್ಲ.. ಅದು ಮೌನವಾಗಿಯೇ ಎದೆಗೂಡು ಸೇರಿಕೊಂಡುಬಿಟ್ಟಿತ್ತು...
ಪ್ರತೀ ಹಂತದಲ್ಲೂ ಅವಳೆದುರು ಮಾತನಾಡಲಾಗದೆ ಸೋತು, ಅವಳನ್ನೂ ಸಂಪೂರ್ಣವಾಗಿ ಕಳೆದುಕೊಂಡು ,
ಕೇವಲ ನೆನಪುಗಳಲ್ಲೇ ಅವಳೊಂದಿಗಿದ್ದು ಬಿಡುವ ಹುಂಬತನಕ್ಕೆ ಈಗಾಗಲೇ ಒಗ್ಗಿಕೊಂಡಿರುವ ನನಗೆ ಅವಳ ನೆನಪು ಕೆದಕಿದ ಗೆಳೆಯನ ಎಸ್ಸೆಮ್ಮೆಸ್ ಮೇಲೆ ಅಗಾಧ ಸಿಟ್ಟು ಬಂದುಬಿಟ್ಟಿತ್ತು. ತಕ್ಷಣ ಅದನ್ನು ಡಿಲೀಟ್ ಮಾಡಿದೆ. ಮನಸ್ಸೇಕೋ ನಿರಾಳವೆನಿಸಿತು. ಈಗ ಮೊಬೈಲ್‌ನ ಇನ್‌ಬಾಕ್ಸ್‌ನಂತೆ ನನ್ನ ಮನಸ್ಸೂ ಖಾಲಿ ಖಾಲಿ.. ಆದರೆ ಇದು ಕ್ಷಣಿಕ.. ಮತ್ತೆ ಇನ್ನೊಂದು ಎಸ್ಸೆಮ್ಮೆಸ್ ಬಂದು ಅವಳ ನೆನಪನ್ನು ಕದಡುವವರೆಗೆ ಮಾತ್ರ.. ನಂತರ ಮತ್ತದೇ ಗೊಂದಲ... ನೋವು.. ಮಧುರ ಯಾತನೆ...

ನೆನಪುಗಳ ಮಾತು ಮಧುರ...
ReplyDelete****
ಮಾತು ಮೌನವಾದರೂ ತೊಂದರೆಯಿಲ್ಲ..
ಕೂಗಾಗಿರದಿರಲಿ...
ಗೆಳೆಯಾ...